ಪಿವಿಆರ್ ರಾಜಾ ( ) ಅವರು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ಸಂಗೀತ ಸಂಯೋಜಕರು. ಅವರನ್ನು ತೆಲುಗು ಚಿತ್ರರಂಗದಲ್ಲಿ "ಶಾರ್ಟ್ ಫಿಲಂಸ್ ಮೇಸ್ಟ್ರು" ಎಂದು ಕರೆಯಲಾಗುತ್ತದೆ. ತೆಲುಗಿನಲ್ಲಿ ಅತಿ ಹೆಚ್ಚು ಕಿರುಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಕ್ಕಾಗಿ ಅವರು "ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್" ನಲ್ಲಿ ಸ್ಥಾನ ಗಳಿಸಿದ್ದಾರೆ. ತೆಲುಗಿನ ವಿಟಮಿನ್ ಶೆ (2020) ಮತ್ತು ಮಧಿ (2022) ಚಿತ್ರಗಳ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. == ಆರಂಭಿಕ ಜೀವನ == ಪಿ. ವಿ. ಆರ್. ರಾಜಾ ವಿಜಯನಗರದಲ್ಲಿ ಪೆನುಮತ್ಸ ವೆಂಕಟ ರಾಮರಾಜು ಆಗಿ ಜನಿಸಿದರು. ಸಂಗೀತ ಸಂಯೋಜಕರಾಗುವ ಮೊದಲು ಅವರು ಸಂಗೀತ ಶಿಕ್ಷಕರಾಗಿ ಕೆಲಸ ಮಾಡಿದರು. == ವೃತ್ತಿಜೀವನ == ಅವರು 2013 ರಿಂದ ಇಲ್ಲಿಯವರೆಗೆ ತೆಲುಗು, ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ 250 ಕ್ಕೂ ಹೆಚ್ಚು ಕಿರು ಮತ್ತು ಸ್ವತಂತ್ರ ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. == ಚಲನಚಿತ್ರಗಳ ಪಟ್ಟಿ == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಪಿವಿಆರ್ ರಾಜಾ ಐ ಎಮ್ ಡಿ ಬಿನಲ್ಲಿ ಪಿವಿಆರ್ ರಾಜಾ ಫೇಸ್‌ಬುಕ್‌ನಲ್ಲಿ